ಪರಪ್ಪಾಡಿ ಫ್ರೇಂಡ್ಸ್ ವತಿಯಿಂದ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕ ಅಮರ್ ಕೋಟೆ'ಗೆ ಗೌರವ ಸನ್ಮಾನ

ಮೂಡುಬಿದ್ರೆ: ಜವನೆರ್ ಬೆದ್ರ ಫೌಂಡೇಶನ್(ರಿ.) ಮೂಡುಬಿದ್ರೆ ನಡೆಸಿರುವ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಪರಪ್ಪಾಡಿ ಫ್ರೇಂಡ್ಸ್ ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪರಪ್ಪಾಡಿ ಫ್ರೇಂಡ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನ್'ಮೆಂಟ್'ನ ಟ್ರೋಫಿ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕರು ಹಾಗೂ ಕದಂಬ ಮೀಡಿಯಾದ ಮುಖ್ಯಸ್ಥರಾದ ಅಮರ್ ಕೋಟೆಯವರಿಗೆ ಸನ್ಮಾನಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಆನಂದ ಶೆಟ್ಟಿ ಮಂಜೆಮನೆ, ಉಡುಪಿ ಜಿಲ್ಲೆಯ ಇಂಟೆಕ್ ಅಧ್ಯಕ್ಷರಾದ ಕಿರಣ್ ಹೆಗಡೆ ಕಾಬೆಟ್ಟು, ಚಿತ್ರನಟ ಸ್ವಸ್ತಿಕ್ ಆರ್ಯ, ಅಧ್ಯಕ್ಷರು ಕಾರುಣ್ಯ ಸೇತು trust, ಪ್ರಕಾಶ್ ಶೆಟ್ಟಿ ಪೂನೆ, ಉದ್ಯಮಿ, ಅರ್ಚಕರಾದ ಜಯಶಾಂತಿ, ಉದ್ಯಮಿಗಳಾದ ಪ್ರಸಾದ್ ಶೆಟ್ಟಿ ಬಜೆಗೊಳಿ,  ಬಿಜೆಪಿ ಯುವ ಮೋರ್ಚಾ ಕಾರ್ಕಳ ಘಟಕದ ಅಧ್ಯಕ್ಷರದ ರಾಕೇಶ್ ಶೆಟ್ಟಿ ಕುಕ್ಕುಂದೂರ್, ಜೈನದ್ದೀನ್ ಹಾಗೂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಸನ್ಮಾನ ನಡೆಸಲಾಯಿತು. ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಎಲ್ಲಾರ ಗಮನಸೆಳೆಯುತ್ತಿರುವ ಜವನೆರ್ ಬೆದ್ರ ಫೌಂಡೇಶನ್(ರಿ.) ಸಂಸ್ಥಾಪಕರಾದ ಅಮರ್ ಕೋಟೆಯವರಿಗೆ ಕದಂಬ ಮೀಡಿಯಾ ವತಿಯಿಂದ ಹೃದಯಸ್ವರ್ಶಿ ಅಭಿನಂದನೆಗಳು.


Post a Comment

0 Comments